ಕೇರಳ ಟು ಈಜಿಪ್ಟ್: ಮಂಗಳೂರು ಯುವಕನಿಂದ ಸೈಕಲ್ನಲ್ಲಿ ಪ್ರಯಾಣ - ಹಾಫಿಲ್ ಅಹ್ಮದ್ ಸಾಬಿತ್
🎬 Watch Now: Feature Video
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಗ್ರಾಮದ ಬೈರಿಕಟ್ಟೆಯ ಹಾಫಿಲ್ ಅಹ್ಮದ್ ಸಾಬಿತ್ (21) ಅವರು ಅಕ್ಟೋಬರ್ 20 ರಂದು ಕೇರಳದಿಂದ ಈಜಿಪ್ಟ್ಗೆ ಸೈಕಲ್ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಹಾಫಿಲ್ ಅಹ್ಮದ್ ಸಾಬಿತ್ ಅವರು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆಯುುತ್ತಿದ್ದಾರೆ. ಈಜಿಪ್ಟ್ಗೆ ಸೈಕಲ್ ಯಾತ್ರೆ ಮಾಡುತ್ತಿರುವುದು ಉನ್ನತ ಧಾರ್ಮಿಕ ಶಿಕ್ಷಣ ಕಲಿಯುವ ಉದ್ದೇಶದಿಂದ. ಇವರಿಗೆ ಈಜಿಪ್ಟ್ನ ಅಲ್ ಅಝ್ಹರ್ ಯುನಿವರ್ಸಿಟಿಯಲ್ಲಿ ಉನ್ನತ ಧಾರ್ಮಿಕ ಶಿಕ್ಷಣಕ್ಕಾಗಿ ಅವಕಾಶ ಸಿಕ್ಕಿದ್ದು, ಮುಂದಿನ ವರ್ಷ ಅಲ್ಲಿ ಹಾಜರಾಗಬೇಕಿದೆ.