ಬೈಕ್ನಲ್ಲಿ ಹೋಗುತ್ತಿದ್ದ ಕುಟುಂಬದ ಮೇಲೆ ನುಗ್ಗಿ ಬಂದ ಗೂಳಿಗಳು - ಒಂದು ಕುಟುಂಬದ ಮೇಲೆ ಎರಡು ಗೂಳಿಗಳು ದಾಳಿ
🎬 Watch Now: Feature Video
ಗುಜರಾತ್ನ ಹಿಮ್ಮತ್‌ನಗರ ಮತ್ತು ಇಡಾರ್ ನಗರದ ನಡುವಿನ ರಸ್ತೆಯ ಬಳಿ ಬಿಡಾಡಿ ಗೂಳಿಗಳು ಹೆಚ್ಚಾಗಿದ್ದು, ದೊಡ್ಡ ಅಪಘಾತಗಳಿಗೂ ಅವುಗಳು ಕಾರಣವಾಗುತ್ತಿವೆ. ವಾಹನ ಚಾಲಕರು ಹಾಗೂ ಪ್ರಯಾಣಿಕರು ಗೂಳಿಗಳಿಂದಾಗಿ ಸಮಸ್ಯೆ ಅನುಭವಿಸಿ, ಗಂಭೀರ ಗಾಯಗಳಾಗಿವೆ. ಇತ್ತೀಚೆಗೆ ಮಹಾವೀರ ನಗರದ ಬಳಿ ಅಂತಹದೇ ಒಂದು ಘಟನೆ ನಡೆದಿದ್ದು, ಬೈಕ್ನಲ್ಲಿ ತೆರಳುತ್ತಿದ್ದ ಒಂದು ಕುಟುಂಬದ ಮೇಲೆ ಎರಡು ಗೂಳಿಗಳು ನುಗ್ಗಿ ಬಂದಿವೆ. ರಸ್ತೆಯಲ್ಲಿ ಗೂಳಿಗಳು ನಿಂತ ವೇಳೆ ಕಾರು ಬಂದಿದೆ. ಆಗ ಬದಿಗೆ ಓಡಿ ಬಂದ ಒಂದು ಗೂಳಿ ಬೈಕ್ನಲ್ಲಿದ್ದ ಮೇಲೆ ಬಂದು ಆಯತಪ್ಪಿ ಬಿದ್ದಿದೆ. ಬೈಕ್ನಲ್ಲಿದ್ದವರು ಸಹ ಕೆಳಗೆ ಬಿದ್ದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.