ಪ್ರವಾಹದಲ್ಲಿ ಮುಳುಗಿದ ಮನೆಗಳು: ಛಾವಣಿಯ ಮೇಲೆ ಸಿಲುಕಿದ್ದವರ ರಕ್ಷಿಸಿದ ವಾಯುಪಡೆ - ಸುಧಾರಿತ ಲೈಟ್ ಹೆಲಿಕಾಪ್ಟರ್
🎬 Watch Now: Feature Video

ಶಿವಪುರಿ (ಮಧ್ಯಪ್ರದೇಶ): ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಮಧ್ಯಪ್ರದೇಶ ತತ್ತರಿಸಿದೆ. ಶಿವಪುರಿ ಜಿಲ್ಲೆಯ ಕೊರ್ವಾ ಪ್ರದೇಶದಲ್ಲಿ ಮನೆಗಳು ಮುಳುಗಡೆಯಾಗಿದ್ದು, ಮನೆಯ ಛಾವಣಿಯ ಮೇಲೆ ಸಿಲುಕಿದ್ದ ನಾಲ್ವರನ್ನು ಭಾರತೀಯ ವಾಯುಪಡೆಯು ಸುಧಾರಿತ ಲೈಟ್ ಹೆಲಿಕಾಪ್ಟರ್ (ಧ್ರುವ) ಬಳಸಿ ರಕ್ಷಿಸಿದ್ದಾರೆ.