ಚಿಕ್ಕಬಳ್ಳಾಪುರ: 3 ಸಾವಿರ ಅಡಿಗೂ ಹೆಚ್ಚು ಉದ್ದದ ತಿರಂಗಾ ಜಾಥಾಗೆ ಚಾಲನೆ - ETV Bharat Kannada
🎬 Watch Now: Feature Video
ದೇಶವ್ಯಾಪಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ 3,000 ಅಡಿಗೂ ಹೆಚ್ಚು ಉದ್ದದ ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳೊಂದಿಗೆ ಹಾರಾಟ ಮಾಡುವ ಮೂಲಕ ಧ್ವಜ ಅಭಿಯಾನಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಚಾಲನೆ ಕೊಟ್ಟರು. ಇದರೊಂದಿಗೆ ತ್ರಿವರ್ಣ ನಡಿಗೆ ಹಾಗೂ ವಾಕಥಾನ್ಗೂ ಚಾಲನೆ ನೀಡಿದ್ದು, ಚಿಕ್ಕಬಳ್ಳಾಪುರ ನಗರದ ಜೈ ಭೀಮ್ ಹಾಸ್ಟೆಲ್ನಿಂದ ನಂದಿ ರಂಗಮಂದಿರದವರೆಗೆ ಸಾವಿರಾರು ವಿದ್ಯಾರ್ಥಿಗಳೊಂದಿಗೆ ವಾಕಥಾನ್ ನಡೆಯಿತು. ಚಿಂತಾಮಣಿಯಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು.