ಕೊರೊನಾ ಕಂಟಕ... ಕೊಳ್ಳುವವರಿಲ್ಲದೆ ನಾಲೆಗೆ ಹಾಲು ಸುರಿದ ಯುವಕರು - ಚಿಕ್ಕೋಡಿ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಕೊರೊನಾ ಕರಿ ನೆರಳು ಇದೀಗ ಹಾಲಿನ ವ್ಯಾಪಾರದ ಮೇಲೂ ತನ್ನ ವಕ್ರದೃಷ್ಠಿ ಬೀರಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಬಾವಿಯಲ್ಲಿ 1500ಕ್ಕೂ ಹೆಚ್ಚು ಲೀಟರ್ ಹಾಲನ್ನು ಗೌಳಿ ಸಮುದಾಯದ ಯುವಕರು ನಾಲೆಗೆ ಸುರಿದಿದ್ದಾರೆ. ಈ ಹಿಂದೆ ರೈತರಿಂದ ಎಮ್ಮೆ ಹಾಲನ್ನು ಲೀಟರ್ಗೆ 32 ರೂಪಾಯಿಯಂತೆ ಈ ಸಮುದಾಯದವರು ಖರೀದಿಸುತ್ತಿದ್ದರು. ಅದೇ ರೀತಿ ಆಕಳ ಹಾಲನ್ನು ಪ್ರತೀ ಲೀಟರ್ಗೆ 22 ರೂಪಾಯಿ ಕೊಟ್ಟು ಖರೀದಿಸುತ್ತಿದ್ದರು. ಆದ್ರೀಗ ಅದೇ ಬೆಲೆಗೆ ಗೌಳಿ ಸಮುದಾಯದ ಯುವಕರು ರೈತರಿಂದ ಖರೀದಿ ಮಾಡಿದರೂ ಸಹ ಗೌಳಿ ಸಮುದಾಯ ಸರಬರಾಜು ಮಾಡುತ್ತಿದ್ದ ಕಂಪನಿಯ ಎಜೆಂಟರು ಕೇವಲ 10 ರೂಪಾಯಿ ಲೀಟರಿನಂತೆ ಹಾಲು ಕೊಡಿ ಇಲ್ಲವಾದರೆ ಹಾಲು ನಮಗೆ ಬೇಡವೆಂದು ಹೇಳಿದ್ದಾರಂತೆ. ಹೀಗಾಗಿ ಗೌಳಿ ಸಮುದಾಯದ ಯುವಕರು ಘಟಪ್ರಭಾ ಎಡದಂಡೆ ನಾಲೆಗೆ ತಾವು ಸಂಗ್ರಹಿಸಿದ ಹಾಲನ್ನು ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಎಂಎಫ್ ಕೂಡಾ ಈ ಯುವಕರು ಸಂಗ್ರಹಿಸಿದ ಹಾಲು ಖರೀದಿಗೆ ಮುಂದಾಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾಗಿ ಹಾಲಿನ ವ್ಯಾಪಾರಿಗಳು ತಿಳಿಸಿದ್ದಾರೆ.