ಮುದ್ದೇಬಿಹಾಳ: ಭೀಮಾ ಕೋರೆಗಾಂವ್ ಹಾಡಿಗೆ ಯುವಕರ ನೃತ್ಯ - ಭೀಮಾ ಕೋರೆಗಾಂವ್ ಹಾಡು

🎬 Watch Now: Feature Video

thumbnail

By

Published : Apr 15, 2021, 8:28 AM IST

ಮುದ್ದೇಬಿಹಾಳ (ವಿಜಯಪುರ): ಡಾ.ಬಿ.ಆರ್.ಅಂಬೇಡ್ಕರ್ 130ನೇ ಜಯಂತಿ ಅಂಗವಾಗಿ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯಲ್ಲಿ ಜನರು ಭೀಮಾ ಕೋರೆಗಾಂವ್ ಹಾಡಿಗೆ ನೃತ್ಯ ಮಾಡಿದರು. ಪಟ್ಟಣದ ನೇತಾಜಿ ನಗರದಿಂದ ಆರಂಭಗೊಂಡ ಮೆರವಣಿಗೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಚಾಲನೆ ನೀಡಿದರು. ಈ ವೇಳೆ ಡಿಜೆ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಾಯಕ' ಧಾರಾವಾಹಿಯ ರಾಷ್ಟ್ರ ಸಂವಿಧಾನಕೆ ನೀನೇ ಶಿಲ್ಪಿಯೂ ಹಾಡು ನೆರೆದವರ ಗಮನ ಸೆಳೆಯಿತು. ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ, ಮೆರವಣಿಗೆ ಅಂತ್ಯಗೊಂಡಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.