ಯುವತಿಯರನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗೆ ಬಿತ್ತು ಗೂಸಾ..ವಿಡಿಯೋ ವೈರಲ್ - ಯುವತಿಯನ್ನ ಚೂಡಾಯಿಸುತ್ತಿದ್ದ ಯುವಕನಿಗೆ ತಳಿಥ
🎬 Watch Now: Feature Video
ಯುವತಿಯರನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೋನನ್ನು ಯುವಕರ ಗುಂಪೊಂದು ಹಿಡಿದು ಥಳಿಸಿದ ಘಟನೆ ಇಲ್ಲಿನ ಬೆಳಗಾವಿ ನಗರದ ಬಾಪಟ್ ಗಲ್ಲಿಯಲ್ಲಿ ನಡೆದಿದೆ. ನಗರದ ಬಾಪಟ್ ಗಲ್ಲಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ದಾರಿಯಲ್ಲಿ ಹೋಗುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ರೋಡ್ ರೋಮಿಯೋ ಯುವತಿಯರನ್ನು ಚುಡಾಯಿಸುತ್ತಿದ್ದನ್ನು ಕಂಡ ಅಲ್ಲಿನ ಸ್ಥಳೀಯ ಯುವಕರು ಈತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Last Updated : Jan 4, 2021, 11:21 AM IST