ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಯಡಿಯೂರಪ್ಪ.. ಬಿಎಸ್ವೈ ಮುಂದಿದೆ ‘ಬಹು’ಮತದ ಸವಾಲು! - undefined
🎬 Watch Now: Feature Video
ಮೈತ್ರಿ ಸರ್ಕಾರ ಪತವಾಗಿ 2 ದಿನ ಕಳೆದ್ರೂ ಬಿಜೆಪಿಯವರು ಮಾತ್ರ ಸರ್ಕಾರ ರಚನೆಗೆ ಮುಂದಾಗಿರಲಿಲ್ಲ. ಯಾಕೆಂದ್ರೆ ಅತೃಪ್ತರ ಮೇಲೆ ಸ್ಪೀಕರ್ ಕೈಗೊಳ್ಳುವ ಕ್ರಮವನ್ನು ಕಾದು ನೋಡುವಂತೆ ತಂತ್ರವನ್ನು ಅನುಸರಿಸಿದ್ರು. ಆದ್ರೆ ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ರು. ದೆಹಲಿಯಿಂದ ಈ ಸುದ್ದಿ ಬರುತ್ತಿದ್ದಂತೆ ಇವತ್ತು ಯಡಿಯೂರಪ್ಪನವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅನುಮತಿ ಕೋರಿ ಪತ್ರ ಸಲ್ಲಿಸಿದ್ದಾರೆ. ಆದ್ರೆ ಸಿಎಂ ಆಗಲು ಹೊರಟಿರುವ ಬಿಎಸ್‌ವೈಗೆ ಸಂಖ್ಯಾಬಲ ಇದೆಯೇ ಅನ್ನೋದೇ ಇದೀಗ ಎಲ್ಲರ ಪ್ರಶ್ನೆಯಾಗಿದೆ.