ಯಾದಗಿರಿ: ಭುವನೇಶ್ವರಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು - ಭುವನೇಶ್ವರಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು
🎬 Watch Now: Feature Video
ಯಾದಗಿರಿ: ನಾಡ ಹಬ್ಬ ವಿಜಯದಶಮಿ ಪ್ರಯುಕ್ತ ಭಕ್ತರು ಬೆಟ್ಟದಲ್ಲಿರುವ ಭುವನೇಶ್ವರಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ನಗರದ ಹೃದಯ ಭಾಗದಲ್ಲಿರುವ ಬೆಟ್ಟದಲ್ಲಿ ಭುವನೇಶ್ವರಿ ಮಂದಿರವಿದ್ದು, ಕಳೆದ 40 ವರ್ಷಗಳಿಂದ ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ದೇವಸ್ಥಾನದ ಸಮಿತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಇಂದು ಕೂಡ ಮಂದಿರದ ಆವರಣದಲ್ಲಿ ಹೋಮ ಹವನ ಹಾಗೂ ವಿವಿಧ ಪೂಜೆ ಕಾರ್ಯಗಳು ಜರುಗಿದವು. ನಗರ ಹಾಗೂ ಸುತ್ತಲಿನಿ ಗ್ರಾಮದ ಸಾವಿರಾರು ಭಕ್ತರು ಬೆಟ್ಟವನ್ನೇರಿ ದೇವಿಯ ಮಂದಿರಕ್ಕೆ ತೆರಳಿ ದೇವಿಯ ದರ್ಶನ ಪಡೆದರು.