ವಿಶ್ವ ಬಿದಿರು ದಿನ: ಬಿದಿರಿನ ಮಹತ್ವ ಹೀಗಿದೆ ತಜ್ಞರ ಅಭಿಮತ
🎬 Watch Now: Feature Video
ತುಮಕೂರು: ಇಂದು ವಿಶ್ವ ಬಿದಿರು ದಿನ. ಇದೇ ಕಾರಣಕ್ಕೆ ಬಿದಿರಿನ ಮಹತ್ವ ಸಾರಲೆಂದೇ ಇಂದು ಹಲವೆಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದರಂತೆ ಹೆಚ್ಚು ಆಕ್ಸಿಜನ್ ಉತ್ಪಾದನೆ ಮಾಡುವಂತಹ ಬಿದಿರು ತುಮಕೂರು ಜಿಲ್ಲೆಯಲ್ಲಿರುವುದರಿಂದ ಇದು ಒಂದು ರೀತಿ ಮಲೆನಾಡಿನ ವಾತಾವರಣವನ್ನೇ ಸೃಷ್ಟಿಸಿದೆ ಅಂದ್ರೆ ತಪ್ಪಾಗಲಾರದು. ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಶೇ.15ರಷ್ಟು ಬಿದಿರು ಕಾಣಸಿಗುತ್ತಿದ್ದು ಅರಣ್ಯ ಇಲಾಖೆ ಇದನ್ನು ಅತಿ ಜತನದಿಂದ ಸಂರಕ್ಷಣೆ ಮಾಡುವ ಮೂಲಕ ಅಭಿವೃದ್ಧಿಪಡಿಸುತ್ತಾ ಬರುತ್ತಿದೆ. ಹಾಗಾಗಿ ಇದು ಜಿಲ್ಲೆಗೆ ಒಂದು ಅಪಾರವಾದ ಸಂಪತ್ತು ಎಂದೆನಿಸುತ್ತಿದೆ.