ಹೇ ಹೊಡೆದು ಸಾಯಿಸಿ ಬಿಡ್ತಿನಿ; ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ಗೆ ಮಹಿಳೆ ಆವಾಜ್! - ಬಿಎಂಟಿಸಿ ಬಸ್
🎬 Watch Now: Feature Video

ಬೆಂಗಳೂರು: ಕೊರೊನಾ ವೈರಸ್ ಹರಡುತ್ತೆ ಮಾಸ್ಕ್ ಹಾಕೊಳ್ಳಮ್ಮ ಅಂತ ಬಿಎಂಟಿಸಿ ಮಹಿಳಾ ಕಂಡಕ್ಟರ್ ಹೇಳಿದ್ದರಿಂದ ಕೋಪಗೊಂಡ ಮಹಿಳೆಯೊಬ್ಬರು ಆವಾಜ್ ಹಾಕಿರುವ ಘಟನೆ ನಡೆದಿದೆ. ನೀನು ಯಾರು ನಂಗೇ ಹೇಳೋದಕ್ಕೆ ಎಂದು ಲೇಡಿ ಕಂಡಕ್ಟರ್ಗೆ ಅವಾಜ್ ಹಾಕಿದ್ದಾರೆ. ಮೆಜೆಸ್ಟಿಕ್ನಿಂದ ಅತ್ತಿಬೆಲೆ ರೋಟ್ ತೆರಳುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ. ಬಸ್ನಲ್ಲಿ ಇದ್ದ ಸಹ ಪ್ರಯಾಣಿಕರು ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದು, ಇದಕ್ಕೆ ಮಹಿಳೆ ಮತ್ತಷ್ಟು ಕೋಪಗೊಂಡ ಏಕವಚನದಲ್ಲಿ ಮಾತನಾಡಿದ್ದು, ಕೆಳಗೆ ಇಳಿದು ಹೋಗುವಾಗ ಹೇ ಹೊಡೆದು ಸಾಯಿಸಿ ಬಿಡ್ತಿನಿ ಅಂತ ಆವಾಜ್ ಹಾಕಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.
Last Updated : Jun 24, 2020, 11:04 PM IST