ಬಿಎಂಟಿಸಿ ಬಸ್ ಹತ್ತಿ 'ನಾನೇ ಸಿಎಂ' ಎಂದ ಮಹಿಳೆ: ಟಿಕೆಟ್ ಖರೀದಿಸದೆ ಸುಮ್ನೆ ಕಿರಿಕ್! ವೈರಲ್ ವಿಡಿಯೋ - banglore bmtc bus viral video
🎬 Watch Now: Feature Video

ಬೆಂಗಳೂರು: ಮಹಿಳೆಯೊಬ್ಬಳು ಬಿಎಂಟಿಸಿ ಬಸ್ ಹತ್ತಿ,'ನಾನೇ ಸಿಎಂ, ಟಿಕೆಟ್ ತೆಗೆದುಕೊಳ್ಳುವುದಕ್ಕೆ ಆಗಲ್ಲ' ಎಂದು ಮೆಜೆಸ್ಟಿಕ್ನಿಂದ ವಿಧಾನಸೌಧಕ್ಕೆ ಹೋಗುತ್ತಿದ್ದ ಬಸ್ನಲ್ಲಿ ಕಂಡಕ್ಟರ್ ಜೊತೆ ಕಿರಿಕ್ ಮಾಡಿದ್ದಾಳೆ. 'ನಾನು ಮುಖ್ಯಮಂತ್ರಿ ಇದ್ದೇನೆ. ನೀವು ನನ್ನ ಬಳಿ ಟಿಕೆಟ್ ಕೇಳೋ ಹಾಗಿಲ್ಲ. ನಾನು ಬಸ್‌ನಿಂದ ಕೆಳಗಡೆನೂ ಇಳಿಯಲ್ಲ, ಕೆಳಗಡೆ ಯಾಕ್ರೀ ಇಳಿಯಬೇಕು?. ನಮ್ಮ ಬಸ್ ನಮ್ಮ ಅಥಾರಿಟಿಯಲ್ಲಿದೆ. ನೀವು ಟಿಕೆಟ್ ಕೇಳೋ ಹಾಗಿಲ್ಲ. ನಾವು ಹೇಳಿದ ಕಡೆ ಕರೆದುಕೊಂಡು ಹೋಗಬೇಕು ಅಷ್ಟೇ' ಎಂದಿದ್ದಾಳೆ. ಆಗ ಕಂಡಕ್ಟರ್, 'ಆಯ್ತು ಪಾಸ್ ತೋರಿಸಿ' ಎಂದು ಹೇಳಿದಾಗ 'ನಾನು ಪಾಸ್ ತೋರಿಸಲ್ಲ, ನನ್ನ ಬಳಿ ಪಾಸ್ ಇಲ್ಲ. ನಾನೇ ಇದ್ದೇನಲ್ಲ, ನಾನೇಕೆ ಪಾಸ್ ತೋರಿಸಲಿ?. ನಾನು ಹೇಳಿದ ಮೇಲೆ ಮುಗೀತು' ಎಂದು ಆವಾಜ್ ಹಾಕಿದ್ದಾಳೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.