ಕಾರವಾರದಲ್ಲಿ ಎಣ್ಣೆಗಾಗಿ ಸಾಲುಗಟ್ಟಿದ ಮದ್ಯಪ್ರಿಯರು - wine shop open news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7051241-thumbnail-3x2-kwr.jpg)
ಉತ್ತರ ಕನ್ನಡದ ಕಾರವಾರದಲ್ಲಿ ಮದ್ಯದಂಗಡಿ ಬಾಗಿಲು ತೆರೆದ ಹಿನ್ನೆಲೆ ಮದ್ಯಪ್ರಿಯರು ಸಂತಸ ವ್ಯಕ್ತಪಡಿಸಿದ್ದು, ಮದ್ಯ ಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ನಗರದ ಎಂಎಸ್ಐಎಲ್ ಹಾಗೂ ವೈನ್ ಶಾಪ್ ಎದುರು ಬೆಳಿಗ್ಗೆಯಿಂದಲೇ ಜನರು ಸಾಲುಗಟ್ಟಿದ್ದಾರೆ. ಮದ್ಯದಂಗಡಿ ತೆರೆಯುವುದನ್ನೇ ಎದುರು ನೋಡುತ್ತಿದ್ದ ಜನರು ಬಾಗಿಲು ಓಪನ್ ಮಾಡ್ತಿದ್ದಂತೆ ಮುಗಿಬಿದ್ದರು. ಇನ್ನು ಸರ್ಕಾರದ ಆದೇಶದಂತೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಮಾಸ್ಕ್ ಮತ್ತು ಸರದಿ ಸಾಲಿನಲ್ಲಿ ಬರುವುದು ಕಡ್ಡಾಯವಾಗಿದೆ. ಮಳಿಗೆಗಳ ಎದುರು ಸ್ಯಾನಿಟೈಸರ್ ವ್ಯವಸ್ಥೆ ಮಾಡುವಂತೆ ಅಂಗಡಿಯವರಿಗೆ ಈಗಾಗಲೇ ಸೂಚಿಸಲಾಗಿದೆ.