ಗೋಧಿ ಹುಗ್ಗಿ, ಜಿಲೇಬಿ, ಪಕೋಡ... ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೋಜನ ಘಮ ಘಮ

By

Published : Feb 7, 2020, 5:02 PM IST

thumbnail
ಕಲಬುರಗಿ: ಗುಲ್ಬರ್ಗಾ ವಿವಿ ಆವರಣದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಗ್ಗೆಯಿಂದ ವಿವಿಧ ಖಾದ್ಯಗಳನ್ನ ತಯಾರಿಸಿ, ಅಲ್ಲಿಗೆ ಬಂದ ಜನರಿಗೆ ಉಣಬಡಿಸಲಾಯಿತು. ಗೋಧಿ ಹುಗ್ಗಿ, ಚಪಾತಿ, ತರಕಾರಿ ಪಲ್ಯ, ಬೇಳೆ, ಸಜ್ಜೆ-ಜೋಳದ ರೊಟ್ಟಿ, ಅನ್ನ-ಸಾರು, ಮಜ್ಜಿಗೆ, ಉಪ್ಪಿನಕಾಯಿ ಶೇಂಗಾ ಚಟ್ನಿ ಸೇರಿದಂತೆ ವಿವಿಧ ಖಾದ್ಯಗಳನ್ನ ಸಿದ್ಧಪಡಿಸಲಾಗಿತ್ತು. ಜೊತೆಗೆ ರಾತ್ರಿ ಊಟಕ್ಕಾಗಿ ಜಿಲೇಬಿ, ಪಕೋಡ ತಯಾರಿಸಲಾಗುತ್ತಿದೆ. ಸಮ್ಮೇಳನಕ್ಕೆ ಬಂದಂತಹ ಜನರು ಈ ವಿಶೇಷ ಭೋಜನವನ್ನ ಸವಿದರು. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.