ಯಾದಗಿರಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಆಕಳು - ಕರು ರಕ್ಷಿಸಿದ ಗ್ರಾಮಸ್ಥರು - villagers rescued a cow while washed away in yadgiri
🎬 Watch Now: Feature Video
ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಆಕಳು ಕರುವೊಂದನ್ನು ಗ್ರಾಮಸ್ಥರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಗ್ರಾಮದ ಬಳಿಯಿರುವ ಕೆರೆ ಕೋಡಿ ಬಿದ್ದಿದ್ದು, ಸೇತುವೆ ದಾಟಲು ಹೋದ ಸಂದರ್ಭದಲ್ಲಿ ಕರು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿತ್ತು. ಗಮನಿಸಿದ ಗ್ರಾಮಸ್ಥರು ಕರುವನ್ನು ಕಾಪಾಡಿದರು. ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆರಾಯನ ಅರ್ಭಟಕ್ಕೆ ಜಿಲ್ಲೆಯ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.