ವಿಜಯಪುರ: ಅದ್ಧೂರಿಯಾಗಿ ನಡೆದ ಯಲಗೂರೇಶ್ವರ ರಥೋತ್ಸವ - ಯಲಗೂರೇಶ್ವರ ಅದ್ದೂರಿ ರಥೋತ್ಸವ
🎬 Watch Now: Feature Video
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಐತಿಹಾಸಿಕ ಯಲಗೂರೇಶ್ವರ ಜಾತ್ರೆ ನಿಮಿತ್ತ ಆಂಜನೇಯ ದೇವಸ್ಥಾನದಲ್ಲಿ ಭವ್ಯ ರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನೇರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಲಗೂರದ ದೇವಸ್ಥಾನ ಬೀದಿಯಲ್ಲಿ ರಥೋತ್ಸವ ನೇರವೇರಿತು. ಭಕ್ತರು ಬಾಳೆಹಣ್ಣು, ಕರ್ಪೂರ, ಹೂವು ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಶನಿವಾರದಿಂದ ಆರಂಭಗೊಂಡಿರುವ ಯಲಗೂರದ ಆಂಜನೇಯ ಜಾತ್ರಾ ಮಹೋತ್ಸವದಲ್ಲಿ ಮೊದಲ ದಿನ ಯಲಗೂರೇಶ್ವರ ಕಾರ್ತಿಕೋತ್ಸವ ನೇರವೇರಿತು. ಪ್ರಸನ್ನಾಚಾರ್ಯ ಕಟ್ಟಿ ಅವರ ತಂಡ ಪೂಜೆ ನೇರವೇರಿಸುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಿದ್ದು, ಭಾನುವಾರ ಬೆಳಗ್ಗೆಯಿಂದಲೇ ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾವಿರಾರು ಭಕ್ತರು ಯಲಗೂರೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದರು.