'ರೌಡಿಗಳ ಪರೇಡ್' ನಡೆಸಿದ ವಿಜಯಪುರ ಡಿವೈಎಸ್ಪಿ: ಖಡಕ್ ಎಚ್ಚರಿಕೆ - ಡಿವೈಎಸ್ಪಿ ಶ್ರೀಧರ ದೊಡ್ಡಿ
🎬 Watch Now: Feature Video
ವಿಜಯಪುರ: ಸಿಂದಗಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನ ಆಲಮೇಲದಲ್ಲಿ ಡಿವೈಎಸ್ಪಿ ಶ್ರೀಧರ ದೊಡ್ಡಿ ರೌಡಿಗಳ ಪರೇಡ್ ನಡೆಸಿದರು. ಚುನಾವಣೆ ವೇಳೆಯಲ್ಲಿ 'ಮನೆಯಿಂದ ಹೊರ ಬಂದರೆ ಹುಷಾರ್' ಎಂದು ಕೊಲೆ, ದರೋಡೆ, ಸರಗಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಗಳಿಗೆ ವಾರ್ನಿಂಗ್ ನೀಡಿದರು. ಜೊತೆಗೆ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡರೆ ಸುಮ್ಮನೆ ಬಿಡುವುದಿಲ್ಲ. ಹಾಗೇನಾದರೂ ಇದ್ದರೆ ಈಗಲೇ ಠಾಣೆಗೆ ವಾಪಸ್ ಮಾಡಿ ಎಂದು ಸೂಚಿಸಿದರು.