ಸಂಭ್ರಮದಿಂದ ಜರುಗಿದ ವೀರಮಹೇಶ್ವರ ಗುಗ್ಗಳೋತ್ಸವ - ರಾಣೆಬೆನ್ನೂರು ವೀರಮಹೇಶ್ವರ ಸ್ವಾಮಿಯ ಗುಗ್ಗಳೋತ್ಸವ
🎬 Watch Now: Feature Video
ರಾಣೆಬೆನ್ನೂರು: ತಾಲೂಕಿನ ಕರೂರು ಗ್ರಾಮದಲ್ಲಿ ಇಂದು ವೀರಮಹೇಶ್ವರ ಸ್ವಾಮಿಯ ಗುಗ್ಗಳೋತ್ಸವ ಬಹಳ ಭಕ್ತಿಯಿಂದ ನಡೆಯಿತು. ಗ್ರಾಮದಲ್ಲಿ ವಿವಿಧ ಬಡಾವಣೆಯಲ್ಲಿ ಸಂಚರಿಸಿದ ವೀರಮಹೇಶ್ವರ ಗುಗ್ಗಳೋತ್ಸವಕ್ಕೆ ಭಕ್ತರು ಎಣ್ಣೆ ದೀಪ ನೀಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಜಾನಪದ ವಿಶೇಷ ಗತ್ತಿನಲ್ಲಿ ನುಡಿಸುತ್ತಿದ್ದ ಸಂಬಾಳ ವಾದ್ಯಕ್ಕೆ ಹೆಜ್ಜೆಹಾಕಿ ಪುರವಂತರ ತಂಡವು ಕುಣಿಯುತ್ತಿದ್ದಂತೆ ನೆರೆದ ಭಕ್ತ ಸಮೂಹವು ಹರಹರ ಮಹಾದೇವ ಎಂದು ಕೂಗುತ್ತಿದ್ದರು.