ದೆಹಲಿ ಗಲಭೆ ತಡೆಯಲು ವಿಫಲವಾದ ಮೋದಿ, ಅಮಿತ್ ಶಾ ರಾಜೀನಾಮೆ ನೀಡಲಿ: ವಾಟಾಳ್ - Vatal Nagaraj
🎬 Watch Now: Feature Video
ರಾಮನಗರ: ದೆಹಲಿಯಲ್ಲಿ ನಡೆದ ಗಲಭೆ ತಡೆಯುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ನಗರದ ಐಜೂರು ವೃತ್ತದಲ್ಲಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಅವರು, ಕೆಂಪುಕೋಟೆಗೆ ನುಗ್ಗಿ ರಾಷ್ಟ್ರಧ್ವಜ ಬದಲಾವಣೆ ಮಾಡುವ ಘಟನೆ ನಡೆದಿದೆ. ಆದರೆ ಕೇಂದ್ರದ ಇಂಟಲಿಜೆನ್ಸ್ ಏನು ಮಾಡುತ್ತಿದೆ. ಪ್ರಧಾನಮಂತ್ರಿ, ಗೃಹ ಮಂತ್ರಿ, ರಕ್ಷಣಾ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ವಾಟಾಳ್ ಒತ್ತಾಯಿಸಿದ್ದಾರೆ. ಮರಾಠ ಪ್ರಾಧಿಕಾರ ಸಂಪೂರ್ಣ ನಿಷೇಧವಾಗಬೇಕು. ನಾಳೆ ಈ ಸಂಬಂಧ ಖಾಸಗಿ ಹೋಟೆಲ್ನಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಜೊತೆಗೆ ಸಭೆ ಕರೆಯಲಾಗಿದೆ. 30ನೇ ತಾರೀಖು ರಾಜ್ಯಾದ್ಯಂತ ರೈಲು ತಡೆದು ಹೋರಾಟ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.