ತೇಜಸ್ವಿ ಸೂರ್ಯ, ರೆಡ್ಡಿ ಯಾರು..? ಅವರದ್ದೇ ಸರ್ಕಾರ ಇದ್ದು ದಂಧೆ ತಡೆಯುವಲ್ಲಿ ವಿಫಲ: ವಾಟಾಳ್ - Bed blocking case
🎬 Watch Now: Feature Video
ರಾಮನಗರ: ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಜಿಲ್ಲಾ ಮಂತ್ರಿ ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ತೇಜಸ್ವಿ ಸೂರ್ಯ ಯಾರು, ಗರುಡಾಚಾರ್ ಯಾರು.? ರೆಡ್ಡಿ ಯಾರು.? ಇವರೆಲ್ಲಾ ಬಿಜೆಪಿ ಸರ್ಕಾರದವರೇ, ಇವ್ರು ಬೆಡ್ಗಳ ದಂಧೆ ಆಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳುವುದು ಅವರ ಕರ್ತವ್ಯ. ಆದರೆ ಅವರದ್ದೆ ಸರ್ಕಾರ ದಂಧೆ ನಿಯಂತ್ರಿಸುವಲ್ಲಿ ಸಂಫೂರ್ಣ ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.