ಭವ್ಯ ರಾಮಮಂದಿರ ನಿರ್ಮಾಣ ನಿಧಿಗೆ ಭರಪೂರ ಸ್ವಾಗತ: ರಂಗೋಲಿಗಳಿಂದ ಸಿಂಗಾರಗೊಂಡ ರಸ್ತೆಗಳು - ಸೇಡಂನಲ್ಲಿ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ
🎬 Watch Now: Feature Video
ಸೇಡಂ: ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಭರಪೂರ ಸ್ವಾಗತ ದೊರೆತಿದೆ. ನಿಧಿ ಸ್ವೀಕರಿಸಲು ಆಗಮಿಸುವ ಕಾರ್ಯಕರ್ತರಿಗೆ ರಂಗೋಲಿ, ತಳಿರು ತೋರಣಗಳಿಂದ ಸ್ವಾಗತಿಸಲಾಗಿದೆ. ಶ್ರೀಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಸದಾಶಿವ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ ತೇಲ್ಕೂರ ಅವರು ಪ್ರತಿಯೊಂದು ವಾರ್ಡ್ಗಳಿಗೆ ತೆರಳಿ ಅಲ್ಲಿ ನಡೆಯುತ್ತಿದ್ದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.