ನೆಹರು ಕಾಲೇಜಿನಲ್ಲಿ ಉಡಾ ಪ್ರತ್ಯಕ್ಷ, ಸ್ನೇಕ್ ಸಂಗಮೇಶ ಅವರಿಂದ ರಕ್ಷಣೆ - ಕಾಲೇಜಿನೊಳಗೆ ಬಂದ ಉಡ
🎬 Watch Now: Feature Video

ಲಾಕ್ಡೌನ್ನಿಂದಾಗಿ ಎಲ್ಲಾ ಶಾಲಾ, ಕಾಲೇಜುಗಳು ಬಂದ್ ಆಗಿವೆ. ಜನ ಸಂಪರ್ಕವಿಲ್ಲದ ಕಾರಣ ಕಾಲೇಜು ಕಟ್ಟಡಗಳು ಕ್ರಿಮಿಕೀಟಗಳ ಆವಾಸ ಸ್ಥಳಗಳಾಗಿವೆ. ಹುಬ್ಬಳ್ಳಿ ನಗರದ ನೆಹರು ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಮರ್ಸ್ ಕಾಲೇಜಿನ ಕಟ್ಟಡದಲ್ಲಿ ಇಂದು ಬೆಳಗ್ಗೆ ಉಡಾ (ಲೀಜರ್ಡ್) ಪ್ರಾಣಿ ಕಂಡು ಬಂದಿದ್ದು, ತಕ್ಷಣ ಆಡಳಿತ ಮಂಡಳಿ ಸ್ನೇಕ್ ಸಂಗಮೇಶ್ ಅವರಿಗೆ ಕರೆ ಮಾಡಿದೆ. ಸ್ಥಳಕ್ಕೆ ಬಂದ ಸಂಗಮೇಶ್ ಅದನ್ನು ಸೆರೆಹಿಡಿದು ಕಾಡಿಗೆ ಬಿಟ್ಟರು. ಇನ್ನು ನಗರದಲ್ಲಿ ಹಾವುಗಳ ಹಾವಳಿ ಜಾಸ್ತಿ ಆದ ಕಾರಣದಿಂದ ಸ್ನೇಕ್ ಸಂಗಮೇಶ ಅವರಿಗೆ ಸಾರ್ವಜನಿಕರಿಂದ ದಿನನಿತ್ಯ ನೂರಾರು ಕರೆಗಳು ಬರುತ್ತಿವೆಯಂತೆ. ಅವರು ಪ್ರತಿದಿನ ಇಪತ್ತಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿದ್ದಾರೆ.