ಉತ್ತರ ಕನ್ನಡ: ಮಕ್ಕಳ ಅನುಪಸ್ಥಿತಿಯಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ - ಉತ್ತರಕನ್ನಡ ಜಿಲ್ಲೆಯಾದ್ಯಂತ 74ನೇ ಸ್ವಾತಂತ್ರ್ಯೋತ್ಸವ
🎬 Watch Now: Feature Video
ಕೊರೊನಾ ಆತಂಕದ ನಡುವೆಯೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ 74ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಸರಳವಾಗಿ ಆಚರಿಸಲಾಯಿತು. ಕಾರವಾರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನಡೆಸಿದರು. ಬಳಿಕ ಪರೇಡ್ ಕಮಾಂಡರ್ ಅವರಿಂದ ಗೌರವ ವಂದನೆ ಸ್ವೀಕರಿಸಿದ ಸಚಿವರು, ತೆರೆದ ವಾಹನದಲ್ಲಿ ಪರೇಡ್ ತಂಡಗಳ ವೀಕ್ಷಣೆ ನಡೆಸಿದರು.