ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಿ : ವಕೀಲ ಜಿ ಎಸ್ ಕುಮಾರ್ ಗೌಡ ಆಗ್ರಹ - urge to add Molakalmuru of Chitradurga to Bellary District
🎬 Watch Now: Feature Video

ಚಿತ್ರದುರ್ಗ : ಜಿಲ್ಲೆಯ ಗಡಿ ತಾಲೂಕು ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸುವಂತೆ ಹಿರಿಯ ವಕೀಲ ಜಿ ಎಸ್ ಕುಮಾರ್ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆಯನ್ನು ನಾವು ಸ್ವಾಗತಿಸುತ್ತೇವೆ. ಆದ್ರೆ, ಕಂದಾಯ ತಾಲೂಕಾಗಿರುವ ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಿ. ಡಿಸೆಂಬರ್ 3ರಂದು ಶ್ರೀರಾಮುಲು ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ ಬಳಿ ನಿಯೋಗ ಕರೆದುಕೊಂಡು ಹೋಗಿ, ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸುವಂತೆ ಮನವಿ ಮಾಡುತ್ತೇವೆ. ಈ ಕೆಲಸ ಸರ್ಕಾರದಿಂದ ಆಗದಿದ್ದಲ್ಲಿ, ತಾಲೂಕಿನ ಜನ ಉಪವಾಸ ಸತ್ಯಾಗ್ರಹ ಮೂಲಕ ಹೋರಾಟ ಕೈಗೊಳ್ಳುವುತ್ತೇವೆ ಎಂದು ಎಚ್ಚರಿಕೆ ನೀಡಿದರು.