ಬಸವೇಶ್ವರನ ದರ್ಶನಕ್ಕೆ ಬೆಟ್ಟ ಹತ್ತುತ್ತವೆ ಎತ್ತುಗಳು.. ಹಿರೇಹುಲ್ಲಾಳ ಗ್ರಾಮದಲ್ಲಿ ಹೀಗೊಂದು ಸಂಪ್ರದಾಯ! - Basaveshwara Fair
🎬 Watch Now: Feature Video
ಹಾವೇರಿ: ಹಾನಗಲ್ ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಒಂದು ವಿಶಿಷ್ಟವಾದ ಸಂಪ್ರದಾಯವಿದೆ. ಎತ್ತುಗಳಿಗೆ ಬಂಡಿ ಕಟ್ಟಿ ಗ್ರಾಮದ ಪಕ್ಕದಲ್ಲಿರುವ ಬೆಟ್ಟದ ಮೇಲಿನ ಬಸವೇಶ್ವರ ದೇವಸ್ಥಾನಕ್ಕೆ ಹತ್ತಿಸಲಾಗುತ್ತದೆ. ಬಂಡಿ ಎಳೆದುಕೊಂಡು ಬಂದು ಸುಮಾರು 500 ಮೀಟರ್ ಎತ್ತರದ ಬೆಟ್ಟವನ್ನು ಹತ್ತುವ ಎತ್ತುಗಳು ಬಸವೇಶ್ವರನ ದರ್ಶನ ಪಡೆಯುತ್ತವೆ. ಈ ರೀತಿ, ಎತ್ತುಗಳು ಬೆಟ್ಟ ಹತ್ತಿದರೆ ಅವುಗಳಿಗೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಇಲ್ಲಿಯ ರೈತರದ್ದು. ಅಲ್ಲದೇ ಬಂಡಿ ಹತ್ತಿಸುವ ಸಂದರ್ಭದಲ್ಲಿ ಏನಾದರು ಅವಘಡವಾದರೆ ಯಾವುದೇ ಪ್ರಾಣಹಾನಿ ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಜನರಲ್ಲಿದೆ.