ಹಾವೇರಿಯಲ್ಲಿ ವಾರದ ಸಂತೆ, ಪಾಲನೆಯಾಗದ ಸಾಮಾಜಿಕ ಅಂತರ - ಹಾವೇರಿಯಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
ಹಾವೇರಿ: ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಮುಂದುವರಿಸಿದೆ. ಆದರೆ ನಗರದ ಹೋಲ್ಸೆಲ್ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಅದ್ರಲ್ಲೂ ಇಂದು ನಗರದ ಸಂತೆ ಇರುವುದರಿಂದ ಮಾರುಕಟ್ಟೆಗೆ ರೈತರು ವ್ಯಾಪಾರಕ್ಕೆ ಬಂದಿದ್ದಾರೆ. ಇದರಿಂದ ಜನದಟ್ಟಣೆ ಹೆಚ್ಚಾಗಿದೆ. ಕೆಲವು ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಪಾಲನೆ ಆಗ್ತಿದ್ದು, ಬಹುತೇಕ ಅಂಗಡಿಗಳ ವ್ಯಾಪಾರಸ್ಥರು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.