ಮೂರು ದಿನಗಳ ಕಾಲ ಗೆಡ್ಡೆ ಗೆಣಸು ಮೇಳ... ಹಲವು ಬಗೆಯ ಗೆಡ್ಡೆಗೆಣಸು ಪ್ರದರ್ಶನ - ಹಲವು ಬಗೆಯ ಗೆಡ್ಡೆಗೆಣಸು ಪ್ರದರ್ಶನ
🎬 Watch Now: Feature Video

ಪಿಜ್ಜಾ ಬರ್ಗರ್ ಅಂತ ಓಡಾಡೋ ಸಿಲಿಕಾನ್ ಸಿಟಿ ಮಂದಿಗೆ, ಗೆಡ್ಡೆ ಗೆಣಸನ್ನು ತಿನ್ನೋದಿರಲಿ ಅವುಗಳ ಪರಿಚಯವೂ ಕೂಡ ಇರುವುದಿಲ್ಲ. ಅಲ್ಲದೆ ಗೆಡ್ಡೆ ಗೆಣಸುಗಳನ್ನು ನಮ್ಮ ಪೂರ್ವಜರು ಯಾಕೆ ಬಳಸುತ್ತಿದ್ದರು. ಅದು ಎಲ್ಲಿ ಸಿಗುತ್ತೆ ಎನ್ನುವುದ ಕೂಡ ಬೆಂಗಳೂರಿಗರಿಗೆ ಗೋತ್ತಿಲ್ಲದ ಸಂಗತಿ. ಆದರೀಗ ಹೈಟೆಕ್ ಸಿಟಿಯ ಮೆಕಾನಿಕ್ ಲೈಫ್ ಜನರಿಗೆ ಈ ಗೆಡ್ಡೆ ಗೆಣಸುಗಳ ಬಗ್ಗೆ ತಿಳಿದು ಕೊಂಡು ಕಾಡುಮೇಡುಗಳಲ್ಲಿ ಸಿಗುವ ಅಪರೂಪದ ಗೆಡ್ಡೆ ಗೆಣಸುಗಳನ್ನು ಸವಿಯುವ ಅವಕಾಶ ಸಿಕ್ಕಿದೆ. ನಗರದ ಮಲ್ಲೇಶ್ವರಂ ಗ್ರೀನ್ ಪಾತ್ ರೆಸ್ಟೋರೆಂಟ್ನಲ್ಲಿ ಗೆಡ್ಡೆ ಗೆಣಸು ಮೇಳ ಆಯೋಜಿಸಿದ್ದು, 3ದಿನಗಳ ಕಾಲ ಗೆನಸು ಮೇಳ ಇರಲಿದೆ.