ಕಾರವಾರದ ಬಿಣಗಾ ಬಳಿ ಬಂಡೆ ಸ್ಫೋಟ.... ಹೈವೇ 66ರಲ್ಲಿ ಸಂಚಾರ ಸ್ಥಗಿತ - ಕಾರವಾರದಲ್ಲಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ ಲೇಟೆಸ್ಟ್ ಸುದ್ದಿ
🎬 Watch Now: Feature Video
ಕಾರವಾರ/: ತಾಲೂಕಿನ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ಬಂಡೆಗಳನ್ನು ಸ್ಫೋಟಿಸಿದ ಹಿನ್ನೆಲೆ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಗಂಟೆಗಟ್ಟಲೇ ವಾಹನಗಳು ನಿಂತಲ್ಲೇ ನಿಲ್ಲುವಾಂತಾಯ್ತು. ಕಾರವಾರದ ಗೋವಾ ಗಡಿಯಿಂದ ಕುಂದಾಪುರದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಬಿಣಗಾ ಬಳಿ ಬೃಹತ್ ಬಂಡೆಗಳನ್ನು ಸ್ಫೋಟಿಸಿ ತೆರವುಗೊಳಿಸಲು ಎರಡು ಬದಿಯ ವಾಹನಗಳ ಸಂಚಾರ ತಡೆಯಲಾಗಿತ್ತು. ಇದರಿಂದ ಗಂಟೆಗಳ ಕಾಲ ಎರಡು ಬದಿ ವಾಹನಗಳು ಕಿಲೋ ಮೀಟರ್ ವರೆಗೆ ಸಾಲುಗಟ್ಟಿದ್ದವು. ಪೊಲೀಸರು ಇಲ್ಲದ ಕಾರಣ ವಾಹನಗಳು ಅಡ್ಡಾದಿಡ್ಡಿ ನಿಂತಿದ್ದು, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
Last Updated : Nov 30, 2019, 4:48 PM IST