ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ತುಮಕೂರಿನ ಪುಣ್ಯ ಕ್ಷೇತ್ರಗಳ ಮಣ್ಣು ರವಾನೆ - ತುಮಕೂರಿನ ಪವಿತ್ರ ಕ್ಷೇತ್ರಗಳ ಮಣ್ಣು ರವಾನೆ
🎬 Watch Now: Feature Video
ತುಮಕೂರು: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನೆರವೇರಲಿರುವ ರಾಮ ಮಂದಿರ ದೇಗುಲದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳ ಮಣ್ಣು ಹಾಗೂ ತೀರ್ಥವನ್ನು ಕಳುಹಿಸಿಕೊಡಲಾಗುತ್ತಿದೆ. ಸಿದ್ದಗಂಗಾ ಮಠ, ಸಿದ್ದರಬೆಟ್ಟ, ದೇವರಾಯನದುರ್ಗ, ನಾಮದ ಚಿಲುಮೆ, ಯಡಿಯೂರಿನ ಸಿದ್ದಲಿಂಗೇಶ್ವರ ದೇಗುಲದ ಮಣ್ಣು ಹಾಗೂ ತೀರ್ಥವನ್ನು ಸಂಗ್ರಹಿಸಲಾಗಿದ್ದು, ವಿಶ್ವ ಹಿಂದೂ ಪರಿಷತ್-ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಈ ಕೆಲಸದಲ್ಲಿ ನಿರತರಾಗಿವೆ.