ಖಾಸಗಿ ಶಾಲಾ-ಕಾಲೇಜುಗಳಿಗೆ ಸಂಚಾರಿ ಪೊಲೀಸರಿಂದ ನೋಟಿಸ್... ಯಾಕೆ ಗೊತ್ತಾ?
🎬 Watch Now: Feature Video
ಬೆಂಗಳೂರು: ರಸ್ತೆ ಬದಿಗಳಲ್ಲಿ ಶಾಲಾ ಬಸ್ ನಿಲ್ಲಿಸಿ, ಸಂಚಾರ ದಟ್ಟಣೆಗೆ ಕಾರಣವಾಗುತ್ತಿರುವ ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ನೊಟೀಸ್ ನೀಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ರಸ್ತೆಗಳಲ್ಲಿ ಶಾಲಾ ಬಸ್ಗಳನ್ನು ಪಾರ್ಕ್ ಮಾಡುತ್ತಿರುವ ಹಿನ್ನೆಲೆ ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನಿಯಮ ಮೀರಿ ರಸ್ತೆಗಳಲ್ಲಿ ಶಾಲಾ ಬಸ್ಗಳನ್ನ ಪಾರ್ಕ್ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ನಿಯಮ ಉಲ್ಲಂಘಿಸಿದ ಶಾಲಾ-ಕಾಲೇಜುಗಳಿಗೆ ಆಯಾ ವಿಭಾಗದ ಸಂಚಾರಿ ಪೊಲೀಸರು ನೊಟೀಸ್ ನೀಡಿ ಎಚ್ಚರಿಸುತ್ತಿದ್ದಾರೆ. ಒಂದು ವೇಳೆ ನೋಟಿಸ್ಗೂ ಶಾಲಾ-ಕಾಲೇಜು ಆಡಳಿತ ವರ್ಗ ಎಚ್ಚೆತ್ತುಕೊಳ್ಳದೇ ಇದ್ರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.