ಟೊಯೋಟಾ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ನಾಳೆ ಕಾರ್ಮಿಕರ ಪ್ರತಿಭಟನೆ: ಮಾಜಿ ಶಾಸಕ ಬಾಲಕೃಷ್ಣ - ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ
🎬 Watch Now: Feature Video
ರಾಮನಗರ: ಟೊಯೋಟಾ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ನಾಳೆ ಜಿಲ್ಲೆಯ ಬಿಡದಿ ಪಟ್ಟಣದಿಂದ ಟೊಯೋಟಾ ಕಂಪನಿಯವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ತಿಳಿಸಿದ್ರು. ಟೊಯೋಟಾ ಕಾರ್ಮಿಕರು ಸತತ 80 ದಿನಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ಮಂದಿ ನಾಯಕರು ಮುಖಂಡರೆಲ್ಲರೂ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಹಲವು ಬಾರಿ ಆಡಳಿತ ಮಂಡಳಿ ಜತೆಗೆ ಮಾತುಕತೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ ಎಂದು ಹೇಳಿದ್ರು.