ಕಲ್ಪತರು ನಾಡಿನಲ್ಲಿ ನಿರ್ಮಾಣವಾಗುತ್ತಿದೆ ಏಷ್ಯಾದಲ್ಲೇ ಅತಿ ಎತ್ತರದ ಮೇಲ್ಗಾಲುವೆ!
🎬 Watch Now: Feature Video
ತುಮಕೂರು: ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ಎತ್ತಿನಹೊಳೆ ಕಾಮಗಾರಿ ಯೋಜನೆ ವ್ಯಾಪ್ತಿಯಲ್ಲಿಯೇ ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿ ಗಮನ ಸೆಳೆದಿದೆ. ನೆಲಮಟ್ಟದಿಂದ 130 ಅಡಿ ಎತ್ತರದಲ್ಲಿ ಈ ಕಾಲುವೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅಂದಾಜು 850 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಾಗಿದೆ. 93.5 ಕ್ಯೂಮೆಕ್ಸ್ (1 ಕ್ಯೂಮೆಕ್ಸ್=35.32 ಕ್ಯೂಸೆಕ್ )ನೀರು ಹರಿಯಲು ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ಈ ಮೆಲ್ಗಾಲುವೆಯಲ್ಲಿ 85 ಕ್ಯೂಮೆಕ್ಸ್ ನೀರು ಹರಿಯಲಿದೆ.
Last Updated : Jul 16, 2020, 12:32 AM IST