ಒಂದಲ್ಲ ಎರಡಲ್ಲ ಮೂರು ಹುಲಿಗಳ ದರ್ಶನ.. ಒಟ್ಟೊಟ್ಟಿಗೆ ವ್ಯಾಘ್ರಗಳನ್ನು ಕಂಡ ಸಫಾರಿಗರು ಖುಷ್..! - tigers apperas to tourists
🎬 Watch Now: Feature Video
ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಕಾಣುವುದೇ ಅಪರೂಪ ಎಂಬ ಮಾತಿನ ನಡುವೆ ಮೂರು ಹುಲಿಗಳು ದರ್ಶನ ಕೊಟ್ಟು ಪ್ರವಾಸಿಗರಿಗೆ ಮುದ ನೀಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೆ.ಗುಡಿಯ ಆನೆಕೆರೆ ಎಂಬಲ್ಲಿ ಮಂಗಳವಾರ ಕಂಡು ಬಂದಿದೆ. ಕೆ. ಗುಡಿಯಲ್ಲಿ ಸಫಾರಿಗೆ ತೆರಳಿದ್ದ ವೇಳೆ ಮೂರು ಹುಲಿ ಒಟ್ಟಾಗಿ ಹೆಜ್ಜೆ ಹಾಕಿ ಪ್ರವಾಸಿಗರನ್ನು ರೋಮಾಂಚನಗೊಳಿಸಿದ್ದು, ಈ ಅಪರೂಪದ ವಿಡಿಯೋವನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.