ಹುಣಸೂರಿನಿಂದ ನಿಲ್ಲಲು ಆಫರ್ ಬಂದದ್ದು ನಿಜ ಆದ್ರೆ, ಪಕ್ಷ ಬದಲಿಸುವ ಪ್ರಶ್ನೆಯೇ ಇಲ್ಲಾ: ಜಿಟಿಡಿ ಪುತ್ರ - ಜೆಡಿಎಸ್ ಟಿಕೆಟ್ ನ ಆಕಾಂಕ್ಷಿ ನಾನಲ್ಲ
🎬 Watch Now: Feature Video
ಮೈಸೂರು:ನಾವು ಜೆಡಿಎಸ್ ಪಕ್ಷವನ್ನು ಬದಲಾಯಿಸುವ ಪ್ರಶ್ನೆ ಇಲ್ಲಾ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಹೇಳಿದ್ದಾರೆ.
ಇಂದು ಈ ಟಿವಿ ಭಾರತ್ ಜೊತೆ ಮಾತನಾಡಿದ ಅವರು, ನನಗೆ ಚುನಾವಣೆ ನಿಲ್ಲುವಂತೆ ಎಲ್ಲಿಂದಲೂ ಒತ್ತಡ ಬಂದಿಲ್ಲ, ನಮ್ಮ ಹುಣಸೂರು ನಾಯಕರು ಮುಖಂಡರು ಬಂದು ನಮ್ಮ ತಂದೆ ಬಳಿ ನಿಮ್ಮ ಮಗನೇ ಜೆಡಿಎಸ್ ನಿಂದ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿರುವುದು ಸತ್ಯ. ಆದರೆ ಈ ನಿಟ್ಟಿನಲ್ಲಿ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ, ಜೆಡಿಎಸ್ ಟಿಕೆಟ್ ನ ಆಕಾಂಕ್ಷಿ ನಾನಲ್ಲ, ಎಂದರು.