ನಬಾರ್ಡ್ ಗ್ರಾಮೀಣ ಸೊಗಡಿನ ಹಳ್ಳಿ ಹಬ್ಬ ಇಂದಿನಿಂದ ಪ್ರಾರಂಭ - The village festival of Nabard

🎬 Watch Now: Feature Video

thumbnail

By

Published : Jan 22, 2021, 8:01 PM IST

ಬೆಂಗಳೂರು: ಗ್ರಾಮೀಣ ‌ಕಲಾವಿದರ ಆಶಾಕಿರಣ ನಬಾರ್ಡ್ ವತಿಯಿಂದ ಗ್ರಾಮೀಣ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇಂದಿನಿಂದ ಐದು ದಿನಗಳ ಕಾಲ ಮಂತ್ರಿ ಮಾಲ್​ನಲ್ಲಿ ಗ್ರಾಮೀಣ ಸೊಗಡಿನ ಹಳ್ಳಿ ಹಬ್ಬ ನಡೆಯುತ್ತಿದೆ. ಇದರಲ್ಲಿ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ‌ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆರ್​ಡಿಪಿಆರ್​​ನ ಪ್ರಿನ್ಸಿಪಲ್ ಸೆಕ್ರೆಟರಿ ಹಾಗೂ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್, ನಬಾರ್ಡ್ ಪ್ರಧಾನ ವ್ಯವಸ್ಥಾಕ ನಿರ್ವಾಹಕ ನಿರಜ್ ಕುಮಾರ್ ವರ್ಮಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರದರ್ಶನದಲ್ಲಿ ಚನ್ನಪಟ್ಟಣದ ಗೊಂಬೆಗಳು, ಮನಮೋಹಕ ಆಭರಣ ಮತ್ತು ಸೌಂದರ್ಯ ವರ್ಧಕಗಳು, ಆಹಾರ ಪದಾರ್ಥಗಳು, ಲಂಬಾಣಿ ಸಮುದಾಯದ ಆಭರಣಗಳು ಸೇರಿದಂತೆ ನೂರಾರು ಉತ್ಪನ್ನಗಳು ಮಾರಾಟಕ್ಕಿವೆ.‌

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.