ಏಯ್ ನವಿಲೇ, ಹೆಣ್ಣ್‌ನವಿಲೇ.. ಬಾರೆ ಚೆಂದದ ಚೆಲುವಿನ ತಾರೆ.. ಒಲವಿನ ಮೊಗವನು ತೋರೆ.. - ಪ್ರೇಯಸಿ
🎬 Watch Now: Feature Video
ಚಿಕ್ಕಮಗಳೂರಿನಲ್ಲಿ ನವಿಲೊಂದು ತನ್ನ ಪ್ರೇಯಸಿಯನ್ನು ಕರೆಯುತ್ತಿರುವ ವಿರಳಾತಿ ವಿರಳ ವಿಡಿಯೋ ನಗರದ ವೈಲ್ಡ್ ಲೈಫ್ ಛಾಯಾಗ್ರಾಹಕ ಶಿವಕುಮಾರ್ ಎಂಬುವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವ ವೇಳೆ ಈ ಅಪರೂಪದ ವಿಡಿಯೋ ಸೆರೆ ಸಿಕ್ಕಿದ್ದು. ನೀರಲ್ಲಿ ಮಿಂದು ಮೇಲೆ ಬಂದಿರೋ ನವಿಲು ಮತ್ತೊಂದು ನವಿಲಿನ ಆಗಮನಕ್ಕೆ ಕಾತರಿಸುತ್ತಲಿತ್ತು. ಈ ನವಿಲಿನ ಆತುರ ಕಂಡ ಮತ್ತೊಂದು ಹೆಣ್ಣು ನವಿಲು ಕೂಡ ಕೂಗುವ ಮೂಲಕವೇ ಬಂದು ಸೂಚನೆ ನೀಡಿತ್ತು.