ಸ್ಟೇರಿಂಗ್ ತುಂಡಾಗಿ ಕಂದಕಕ್ಕೆ ಉರುಳಿದ ಸಿಮೆಂಟ್ ಲಾರಿ - lorry fell into the ditch gadag
🎬 Watch Now: Feature Video
ಗದಗ: ಸಿಮೆಂಟ್ ಲಾರಿಯೊಂದು ವೇಗವಾಗಿ ಬರುತ್ತಿದ್ದಾಗ ಸ್ಪೀಡ್ ಬ್ರೇಕ್ ದಾಟುವ ವೇಳೆ ಸ್ಟೇರಿಂಗ್ ಕಟ್ ಆಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿರುವ ಘಟನೆ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಿಣಾಮ ಲಾರಿ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯೊಳಗೆ ಸಿಲುಕಿದ್ದ ಚಾಲಕ ಶಿವಕುಮಾರ್ ದೊಶೆಟ್ಟಿ ಹಾಗೂ ಕ್ಲೀನರ್ ಇಸ್ಮಾಯಿಲ್ ಸಾಬ್ ಎಂಬಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಲಾರಿ ಕಲಬುರಗಿಯಿಂದ ಹುಬ್ಬಳ್ಳಿಗೆ ಹೊರಟಿತ್ತು ಎಂದು ತಿಳಿದುಬಂದಿದೆ.