ರಾಜಧಾನಿಗೂ ಕಾಲಿಟ್ಟ ಚಿರತೆ..? ಸಿಸಿ ಟಿವಿಯಲ್ಲಿ ದೃಶ್ಯ ಸೆರೆ - bangalore leopard news
🎬 Watch Now: Feature Video
ಬೆಂಗಳೂರು: ನಗರದ ಯಶವಂತಪುರ ತಿಗಳರಪಾಳ್ಯ ಸಮೀಪದ ಕರಿ ಓಬನಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಕಳೆದ ಮಾ.3 ರಂದು ಮಲ್ಲೇಶ್ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ರಾತ್ರಿ ವೇಳೆ ಚಿರತೆಯು ಒಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಹಾರ ಅರಸಿ ಬಂದ ಚಿರತೆ ನಾಯಿಯನ್ನು ಕೊಂದು ಹಾಕಿದೆ. ಜೊತೆಗೆ ಚಿರತೆ ಕಾಣಿಸಿಕೊಂಡ ಕುರಿತಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.