ರಾಮಜನ್ಮಭೂಮಿ ಬಗ್ಗೆ ಕೋರ್ಟ್ ತೀರ್ಪು ಸ್ವಾಗತಾರ್ಹ:ವಿಶ್ವೇಶ್ವರ ಹೆಗಡೆ ಕಾಗೇರಿ - ಲೆಟೆಸ್ಟ್ ಶಿರಸಿ ನ್ಯೂಸ್
🎬 Watch Now: Feature Video
ರಾಮಜನ್ಮಭೂಮಿ ಅಯೋಧ್ಯೆಯ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುವುದಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ತಿಳಿಸಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೇರಿ, ಅಯೋಧ್ಯೆ ತೀರ್ಪಿನಿಂದ ದೇಶದ ಕೋಟ್ಯಂತರ ಜನರ ಭಾವನೆಗಳಿಗೆ ಗೌರವ ಸಿಕ್ಕಿದೆ. ಅನೇಕ ಶತಮಾನಗಳಿಂದ ಇದ್ದ ವಿವಾದ ಅಂತ್ಯ ಕಂಡಿದೆ. ಇದರಿಂದ ನಾಡಿನೆಲ್ಲೆಡೆ ಪ್ರೀತಿ ವಿಶ್ವಾಸದ ಬಾಂಧವ್ಯ ಬೆಳೆಯಲಿ ಎಂಬ ಆಶಯ ವ್ಯಕ್ತಪಡಿಸಿದ್ರು.