ಮನೆಯೇ ಈ ಮೂಕಪ್ರಾಣಿಗಳಿಗೆ ಆಶ್ರಯಧಾಮ, ಗೋಪಾಲ ಭಟ್ಟರೇ ಗುರು! - undefined
🎬 Watch Now: Feature Video
ಶಿರಸಿ: ಮನೆ ಮುಂಭಾಗದಲ್ಲಿ ವಿವಿಧ ಪ್ರಾಣಿಗಳ ಕಲರವ, ಬಗೆ ಬಗೆ ಪಕ್ಷಿಗಳ ಚಿಲಿಪಿಲಿ ಇದ್ದರೆ ಹೇಗಿರುತ್ತೆ ಒಮ್ಮೆ ಊಹಿಸಿನೋಡಿ..! ಮನೆ ಯಜಮಾನನ ಜೊತೆ ಆತ್ಮೀಯವಾಗಿ ಬೆರೆಯುವ ಪ್ರಾಣಿಗಳು, ಸವಾರಿ ಜೊತೆ ಕೃಷಿ ಕೆಲಸಕ್ಕೂ ಸೈ ಎನ್ನುವ ಕುದುರೆಗಳು. ಹೀಗೆ ನಾನಾ ರೀತಿಯ ಪ್ರಾಣಿ, ಪಕ್ಷಿಗಳು ನಮಗೆ ಕಾಣಸಿಗುವುದು ಯಾವುದೋ ಪ್ರಾಣಿ ಸಂಗ್ರಹಾಲಯದಲ್ಲಂತೂ ಅಲ್ಲ. ಬದಲಾಗಿ ಪ್ರಾಣಿಪ್ರಿಯ ಸಿದ್ದಾಪುರ ತಾಲೂಕಿನ ಗೋಪಾಲ ಭಟ್ಟರ ಮನೆಯಲ್ಲಿ. ಅರೆ ವಾವ್..! ಅನ್ನೋ ರೀತಿಯಲ್ಲಿ ಭಟ್ಟರು ಈ ಪ್ರಾಣಿ-ಪಕ್ಷಿಗಳನ್ನು ಸಾಕಿ,ಸಲಹುತ್ತಿದ್ದಾರೆ.
Last Updated : Apr 26, 2019, 11:29 PM IST