ಅಪ್ಪು ನೆನೆದು ಕಣ್ಣೀರು ಹಾಕಿದ ಸಿಂಗಂ ಖ್ಯಾತಿಯ ತಮಿಳು ನಟ ಸೂರ್ಯ - tamil actor soorya visit
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13550609-thumbnail-3x2-news.jpg)
ಸಿಂಗಂ ಖ್ಯಾತಿಯ ತಮಿಳು ನಟ ಸೂರ್ಯ ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿಗೆ ನಮನ ಸಲ್ಲಿಸಿದ ಅವರು ನೆಚ್ಚಿನ ನಟನನ್ನ ನೆನೆದು ಕಣ್ಣೀರು ಹಾಕಿದರು. ಬಳಿಕ ಮಾತನಾಡಿ, ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರು ನನಗೆ ಮಾದರಿಯಾಗಿದ್ದರು. ಎಲ್ಲ ಫೋಟೋಗಳಲ್ಲೂ ಪುನೀತ್ ನಗ್ತಿದ್ರು. ಕನ್ನಡಿಗರಿಗೆ ನಾನು ಏನು ಹೇಳಬೇಕೋ ತೋಚುತ್ತಿಲ್ಲ. ದೇವರು ಪುನೀತ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು.