ಮಂಗಳೂರಿನಲ್ಲಿ ವ್ಯಕ್ತಿ ಮೇಲೆ ತಲವಾರ್ನಿಂದ ದಾಳಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - Talwar attack Captured on Scene CCTV
🎬 Watch Now: Feature Video
ಮಂಗಳೂರು: ವ್ಯಕ್ತಿಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರ್ನಿಂದ ದಾಳಿ ನಡೆಸಿದ ಘಟನೆ ಮಂಗಳೂರು ಹೊರವಲಯದಲ್ಲಿನ ಗುರುಪುರದ ಕಂದಾವರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಬ್ದುಲ್ಲಾ ಎಂಬುವವರು ಕಳೆದ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಹಿಂದಿನಿಂದ ಬಂದು ದಾಳಿ ಮಾಡಿದ್ದಾರೆ. ಓರ್ವ ಹೊಡೆದು ಓಡಿ ಹೋದರೆ ಮತ್ತೋರ್ವ ತಲವಾರ್ನಿಂದ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಅಬ್ದುಲ್ಲಾ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.