ಕೊರೊನಾ ಆರ್ಭಟಕ್ಕೆ ಜಾತ್ರೆಗಳಿಗೆ ನಿರ್ಬಂಧ.. ಬದುಕು ಬೀದಿಗೆ ಬರುವ ಆತಂಕದಲ್ಲಿ ಸಿಹಿ ತಿಂಡಿ ವ್ಯಾಪಾರಸ್ಥರು! - sweet Merchants fear about corona
🎬 Watch Now: Feature Video
ಕಾರವಾರ: ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗುತ್ತಿದ್ದಂತೆ ಜಾತ್ರೆ ಸೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ನೂರಾರು ದೇವರ ಕಾರ್ಯಗಳು ರದ್ದಾಗಿವೆ. ಆದರೆ, ಜಾತ್ರೆಯನ್ನೇ ನಂಬಿ ಸಿಹಿ ತಿಂಡಿ, ಹೂ-ಹಣ್ಣು ವ್ಯಾಪಾರದ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದವರಿಗೆ ಈ ಬಾರಿ ಮತ್ತೆ ನಿರ್ಬಂಧದಿಂದ ಮತ್ತಷ್ಟು ಪೆಟ್ಟು ಬೀಳಲಿದೆ. ಬದುಕೇ ಬೀದಿಗೆ ಬರುವ ಆತಂಕ ಎದುರಾಗಿದೆ.