ಮೂಢನಂಬಿಕೆಯಿಂದ ಹೊರಬರುವಂತೆ ಪೆಮ್ಮನಹಳ್ಳಿ ಜನತೆಗೆ ಸ್ವಾಮೀಜಿಗಳ ಕರೆ - ಸಂಸದ ಎ. ನಾರಾಯಣಸ್ವಾಮಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4534980-thumbnail-3x2-tmk.jpg)
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಸ್ವಾಮೀಜಿಗಳ ದಂಡೇ ಸೇರಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು 8 ದಿನಗಳ ಹಿಂದೆ ನಡೆದ ಘಟನೆ. ಅಂದು ಗೊಲ್ಲರಟ್ಟಿಗೆ ಆಗಮಿಸಿದ್ದ ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ಜನ ಪ್ರವೇಶ ನಿರಾಕರಿಸಿದ್ದರು. ಹೀಗಾಗಿ ಗ್ರಾಮಸ್ಥರಲ್ಲಿರುವ ಮೂಢನಂಬಿಕೆ ಮತ್ತು ಅಸ್ಪೃಶ್ಯ ಮನೋಭಾವನೆಯಿಂದ ಹೊರಬರುವಂತೆ ಸ್ವಾಮೀಜಿಗಳು ಕರೆ ನೀಡಿದರು. ಗ್ರಾಮಸ್ಥರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.