ಮರಾಠ ಪ್ರಾಧಿಕಾರ ರದ್ದು ಮಾಡದಿದ್ದರೆ ಯಡಿಯೂರಪ್ಪ ಪತನವಾಗ್ತಾರೆ: ಸಾ.ರಾ ಗೋವಿಂದ್
🎬 Watch Now: Feature Video
ಹಾಸನ: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ನಾಳೆ ನಡೆಯಲಿರುವ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಗುವ ಸಾಧ್ಯತೆಯಿದೆ. ಹಾಸನದ ಹಲವು ಸಂಘಟನೆಗಳು ಈಗಾಗಲೇ ಬಂದ್ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ಸೂಚಿಸಿವೆ. ಈ ಕುರಿತು ಮಾತನಾಡಿದ ಕನ್ನಡಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಮತ್ತು ಡಾ.ರಾಜ್ ಕುಮಾರ್ ಸಂಘಟನೆಯ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದ್, ಹಾಸನದಲ್ಲಿ ಬಹುತೇಕ ಎಲ್ಲಾ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ, ಬಂದ್ ಯಶಸ್ವಿಯಾಗಲಿವೆ ಎಂದಿದ್ದಾರೆ.