ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್: ಸಿಸಿಟಿವಿ ವಿಡಿಯೋ - ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11232293-thumbnail-3x2-newss.jpg)
ಮಂಗಳೂರು: ಕಾಲೇಜಿಗೆ ಹೋಗುವ ಧಾವಂತದಲ್ಲಿ ವಿದ್ಯಾರ್ಥಿನಿಯೊಬ್ಬಳು ರಸ್ತೆ ದಾಟುವಾಗ ಬಸ್ನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ನಗರದ ಮರಕಡ ಜ್ಯೋತಿ ನಗರದಲ್ಲಿ ಘಟನೆ ನಡೆದಿದ್ದು, ಅದೇ ಜ್ಯೋತಿನಗರ ನಿವಾಸಿ ಪವಿತ್ರಾ(21) ಮೃತಪಟ್ಟ ವಿದ್ಯಾರ್ಥಿನಿ. ತಮ್ಮ ಮನೆಯಿಂದ ಓಡೋಡಿ ಬಂದ ಪವಿತ್ರಾ ನಿಲ್ದಾಣದಲ್ಲಿ ನಿಂತಿರುವ ಬಸ್ ಮುಂಭಾಗದಿಂದಲೇ ಹೋಗಿದ್ದಾರೆ. ಅದೇ ಸಂದರ್ಭದಲ್ಲಿ ಹೊರಡಲನುವಾದ ಬಸ್ ಚಲಿಸಲು ಆರಂಭಿಸಿ ಓಡಿ ಬರುತ್ತಿದ್ದ ಪವಿತ್ರಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಪವಿತ್ರಾ ಮೇಲೆಯೇ ಬಸ್ ಹರಿದಿದೆ.