ಪರಿಹಾರ ನಿಧಿ ಹಣ ಬಳಸಿ ರೈತರಿಗೆ ಸಹಾಯ ಮಾಡಿ: ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್ - lockdown impact on farmers
🎬 Watch Now: Feature Video
ಕೊರೊನಾ ಲಾಕ್ಡೌನ್ನಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್ ಈಟಿವಿ ಭಾರತ್ ನೇರಪ್ರಸಾರದಲ್ಲಿ ಮಾತನಾಡಿದ್ದಾರೆ. ಲಾಕ್ಡೌನ್ನಿಂದಾಗಿ ರೈತರಿಗೆ ಮಾರುಕಟ್ಟೆ ಸಿಗದೇ ತೊಂದರೆಗೀಡಾಗಿದ್ದಾರೆ. ಹೀಗಾಗಿ ಸರ್ಕಾರ ಅವರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಪರಿಹಾರ ನಿಧಿ ಹಣ ಬಳಸಿ ರೈತರಿಗೆ ಸಹಾಯ ಮಾಡಬೇಕು. ನಮ್ಮಲ್ಲಿ ಆಹಾರ ಬೆಳೆಗಳ ಉತ್ಪಾದನೆ ಚೆನ್ನಾಗಿದೆ. ಆದರೆ ಅವುಗಳ ಕೋಲ್ಡ್ ಸ್ಟೋರಿಂಗ್ ಸಮಸ್ಯೆ ಇದ್ದು, ಅದಕ್ಕೆ ಸೂಕ್ತ ವ್ಯವಸ್ಥೆಯಾಗಬೇಕು. ಸದ್ಯದ ಗಂಭೀರ ಸ್ಥಿತಿಯಲ್ಲಿ ಲಾಕ್ಡೌನ್ ಮುಂದುವರಿಕೆ ಒಳ್ಳೆಯದೆ. ರೈತರು ಈ ಸಮಯದಲ್ಲಿ ಧೈರ್ಯದಿಂದಿರಬೇಕು ಎಂದು ಹೇಳಿದ್ರು.