ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ: ಮಹಿಳಾ ಕಾಂಗ್ರೆಸ್ನಿಂದ ಮೌನಾಚರಣೆ - news kannada
🎬 Watch Now: Feature Video
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ವಿರೋಧಿಸಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಕೋರಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗ ಇಂದು ಸಂಜೆ ಮೊಂಬತ್ತಿ ಬೆಳಗಿ ಮೌನಾಚರಣೆ ನಡೆಸಲಾಯಿತು. ದ.ಕ.ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮರಿಯಮ್ಮ ಥಾಮಸ್, ತನ್ವೀರ್ ಶಾ, ರೂಪಾ ಚೇತನ್, ಪ್ರಭಾವತಿ, ಸುರೇಖಾ ಚಂದ್ರಹಾಸ, ಶಾಂತಲಾ ಗಟ್ಟಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.