ಎಲ್ಲರಂತಲ್ಲ ನಮ್ ಗವಿಮಠದ ಸ್ವಾಮೀಜಿ.. ಹಳ್ಳಕ್ಕೆ ಕಾಯಕಲ್ಪ ಕೊಟ್ಟು ರೈತರ ಬಾಳು ಹಸಿರಾಗಿಸಿದ ಗುರು.. - ಹಿರೇಹಳ್ಳಕ್ಕೆ ಭರ್ತಿ ನೀರು..!
🎬 Watch Now: Feature Video
ಕೊಪ್ಪಳದ ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಆ ಸಂಕಲ್ಪ ಫಲಿಸಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಜನರ ಸಹಭಾಗಿತ್ವದಲ್ಲಿ ಶ್ರೀಗಳು ಮಾಡುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ಶ್ರೀಗಳು ಸ್ವಚ್ಛಗೊಳಿಸಿದ್ದ ಹಿರೇಹಳ್ಳಕ್ಕೆ ಈಗ ನೀರು ಬಂದಿದ್ದು ಹಳ್ಳದಲ್ಲಿನ ಬಾಂದಾರಗಳಲ್ಲಿ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ಆ ಭಾಗದ ಅನ್ನದಾತರು ಫುಲ್ ಖುಷ್ ಆಗಿದ್ದಾರೆ.