ಪ್ರಧಾನಿ ಮೋದಿಗೆ ತಲುಪುತ್ತಂತೆ ಶ್ರೀ ಚೌಡೇಶ್ವರಿ ದೇವಿ ಪ್ರಸಾದ; ಎಲ್ಲಿದೆ ಗೊತ್ತಾ ಈ ಪುಣ್ಯ ಸ್ಥಳ ? - ಶಕ್ತಿ ದೇವತೆಗಳ ಆರಾಧನೆ
🎬 Watch Now: Feature Video
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇಗುಲಗಳಲ್ಲಿ ಶಕ್ತಿ ದೇವತೆಗಳ ಆರಾಧನೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಅದೇ ರೀತಿ ಜಿಲ್ಲೆಯ ತಿಪಟೂರು ತಾಲೂಕಿನ ದಸರಿಘಟ್ಟ ಶ್ರೀ ಚೌಡೇಶ್ವರಿ ದೇಗುಲದಲ್ಲಿ ನಡೆಯುತ್ತಿರುವ ಪೂಜೆಯ ಪ್ರಸಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸಲಾಗುತ್ತದೆ. ಇಂತಹದೊಂದು ವಿಶೇಷವಾದ ದೇವಿಯ ಕೃಪೆಗೆ ಪಾತ್ರವಾಗಿರುವ ಪ್ರಧಾನಿ ಮೋದಿಗೆ ಕುಂಕುಮ ಹಾಗೂ ನಿಂಬೆಹಣ್ಣನ್ನು ಕಳುಹಿಸಿಕೊಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಪ್ರತಿ ನವರಾತ್ರಿಯ ವೇಳೆ ಪ್ರಧಾನಿಯ ಆಪ್ತರೊಬ್ಬರು ಬಂದು ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
Last Updated : Oct 5, 2019, 12:59 PM IST